ಕರ್ನಾಟಕ ಸ್ವತಂತ್ರ ಸಾಫ್ಟ್ ವೇರ‍್ ಆಂದೋಲನ (ಎಫ್.ಎಸ್.ಎಮ್.ಕೆ.) ಲಿನಕ್ಸ್ (ಡೆಬಿಯಾನ್ ಗ್ನು) ಸಾಫ್ಟ್ ವೇರಿನ ಕನ್ನಡ ಅವತಾರವನ್ನು ಬಿಡುಗಡೆ ಮಾಡಲಿದೆ. ಇದು ಎಫ್.ಎಸ್.ಎಮ್.ಕೆ. ನ ಮತ್ತು ಇತರ ಉತ್ಸಾಹಿ ಸ್ವತಂತ್ರ ಸಾಫ್ಟ್ ವೇರ‍್ ಸ್ವಯಂಸೇವಕರ ಶ್ರಮದ ಫಲ. ಕಂಪ್ಯೂಟರಿನಲ್ಲಿ ಕನ್ನಡದ ಬಳಕೆಗೆ ಅಗ್ಗದ ಪರಿಣಾಮಕಾರಿ ಸ್ವತಂತ್ರ ಸಾಫ್ಟ್ ವೇರ‍್ ಬದಲಿ ಒದಗಿಸುವ ಮೂಲಕ, ಇ-ಆಡಳಿತ, ಶಿಕ್ಷಣ, ಕಚೇರಿ ಮತ್ತು ಮನೆಗಳಲ್ಲಿ ಕನ್ನಡದ ಬಳಕೆಗೆ ಮತ್ತು ಭಾಷೆಯ ಆಧುನಿಕೀಕರಣಕ್ಕೆ ಉತ್ತೇಜನ ನೀಡಲಿದೆ.